Home

ಮಡಿಕೇರಿ ನಗರಸಭೆಯನ್ನು ಸರ್ಕಾರ ದಿನಾಂಕ 01-01-2004ರಿಂದ ಮೇಲ್ದರ್ಜೆಗೆ ಏರಿಸಿ ನಗರಸಭೆ ಮಾಡಲಾಗಿದೆ. ಮಡಿಕೇರಿ ನಗರಸಭೆಯು 1904ರಲ್ಲಿ ಸ್ತಾಪನೆಯಾಗಿರಬಹುದಾಗಿ ಅಂದಾಜಿಸಲಾಗಿದೆ. ಮಡಿಕೇರಿ ನಗರಸಭೆಯು ಮೈಸೂರು ಬಂಟ್ವಾಳಕ್ಕೆ ಹಾದು ಹೋಗುವ ರಸ್ತೆ ಸಮೀಪವಿರುತ್ತದೆ. ಮಂಗಳೂರಿನಿಂದ 140 ಕಿ.ಮೀ., ಬೆಂಗಳೂರಿನಿಂದ 260 ಕಿ.ಮೀ. ದೂರದಲ್ಲಿರುತ್ತದೆ. 2011ರ ಜನಗಣತಿ ಪ್ರಕಾರ ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ 33.415 ಜನಸಂಕ್ಯೆಯನ್ನು ಹೊಂದಿರುತ್ತದೆ. ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ 31 ವಾರ್ಡಗಳಿದ್ದು, 31 ಚುನಾಯಿತ ಸದಸ್ಯರು ಹಾಗೂ 5 ನಾಮ ನಿದೇಶಿತ ಸದಸ್ಯರಿರುತ್ತಾರೆ. ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ ಒಟ್ಟು 17.00 ಚದರ ಕಿ.ಮೀ. ಗಲಿರುತ್ತದೆ. ಕೊಡಗಿನ ವೀರರಾಜೇಂದ್ರ ಅಳಿದ ಮಡಿಕೇರಿ ನಗರದಲ್ಲಿ ರಾಜರ ಕಾಲದ ಗದ್ದಿಗೆ, ರಾಜರ ಕಾಲದ ಕೋಟೆ ಮಡಿಕೇರಿ ನಗರ ಸಭೆಯ ವ್ಯಾಪ್ತಿಯಲ್ಲಿರುತ್ತದೆ. ಈ ಸ್ಥಳವು ಪುರಾತತ್ವ ಇಲಾಖೆಗೆ ಒಳಪಡುತ್ತದೆ. ಪ್ರವಾಸ ತಾಣವೆಂದೆ ಪ್ರಸಿದ್ದಿ ಪಡೆದ ಅಬ್ಬಿ ಜಲಪಾತ 8 ಕಿ.ಮೀ. ಅತೀ ಎತ್ತರದ ಬೆಟ್ಟ ಮಾಂದಲಪಟ್ಟಿ 25 ಕಿ.ಮೀ. ದೂರದಲ್ಲಿರುತ್ತದೆ. ನಗರದೊಳಗೆ ಬರುವ ಪ್ರವಾಸಿತಾಣವಾದ ರಾಜಾಸೀಟ್ ಉದ್ಯಾನವನ ನಗರಸಭೆ ಸಮೀಪದಲ್ಲಿರುತ್ತದೆ. ಇದಲ್ಲದೆ ಪ್ರವಾಸಿ ತಾಣಗಳಾದ ಕಾವೇರಿ ಮಾತೆ ಉಗಮ ಸ್ಥಾನ ತಲಕಾವೇರಿ ಭಾಗಮಂಡಲ 42 ಕಿ.ಮೀ., ನಾಗರಹೊಳೆ 110 ಕಿ.ಮೀ., ದುಬಾರೆ 35 ಕಿ.ಮೀ., ಕಾವೇರಿ ನಿಸಗಱದಾಮ 28 ಕಿ.ಮೀ. ದೂರದಲ್ಲಿರುತ್ತದೆ. ಮಡಿಕೇರಿಯಲ್ಲಿ ಐತಿಹಾಸಿಕ ದಸರಾ ಉತ್ಸವನ್ನು ವರ್ಷಂಪ್ರತಿ 9 ದಿಗಳ ಕಾಲ ನಗರಸಭೆ ವತಿಯಿಂದ ಚರಿಸಲಾಗುತ್ತದೆ. ಈ ಉತ್ಸವಕ್ಕೆ ಸರ್ಕಾರ ಜನೋತ್ಸವ ಎಂದು ಹೆಸರಿಟ್ಟದೆ. ದಸರಾ ಉತ್ಸವ ಹಗಲು ರಾತ್ರಿ ನಡೆಯುವ ಬೃಹತ್ ದೊಡ್ಡ ಉತ್ಸವವಾಗಿದ್ದು ಇದನ್ನು ಸವಿಯಲು ಜನಸಾಗರವೇ ಹರಿದು ಬರುತ್ತದೆ.

No. Of Visitors :
Last Updated   : 21/01/2012  Release History
Release 2.0.0, Powered By Karnataka Municipal Data Society & maintained by Madikeri CMC
This website can best viewed with the resolution 1024 * 768 using Internet Explorer 7.0 or above.
Valid CSS!