Home

ಸಂಕ್ಷಿಪ್ತ ವಿವರ:-

 


ಮಡಿಕೇರಿ ನಗರಸಭೆಯನ್ನು ಸರ್ಕಾರ ದಿನಾಂಕ 01-01-2004ರಿಂದ ಮೇಲ್ದರ್ಜೆಗೆ ಏರಿಸಿ ನಗರಸಭೆ ಮಾಡಲಾಗಿದೆ. ಮಡಿಕೇರಿ ನಗರಸಭೆಯು 1904ರಲ್ಲಿ ಸ್ತಾಪನೆಯಾಗಿರಬಹುದಾಗಿ ಅಂದಾಜಿಸಲಾಗಿದೆ. ಮಡಿಕೇರಿ ನಗರಸಭೆಯು ಮೈಸೂರು ಬಂಟ್ವಾಳಕ್ಕೆ ಹಾದು ಹೋಗುವ ರಸ್ತೆ ಸಮೀಪವಿರುತ್ತದೆ. ಮಂಗಳೂರಿನಿಂದ 140 ಕಿ.ಮೀ., ಬೆಂಗಳೂರಿನಿಂದ 260 ಕಿ.ಮೀ. ದೂರದಲ್ಲಿರುತ್ತದೆ. 2011ರ ಜನಗಣತಿ ಪ್ರಕಾರ ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ 33.415 ಜನಸಂಖ್ಯೆಯನ್ನು ಹೊಂದಿರುತ್ತದೆ. ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ 31 ವಾರ್ಡಗಳಿದ್ದು, 31 ಚುನಾಯಿತ ಸದಸ್ಯರು ಹಾಗೂ 5 ನಾಮ ನಿರ್ದೇಶಿತ ಸದಸ್ಯರಿರುತ್ತಾರೆ. ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ ಒಟ್ಟು 17.00 ಚದರ ಕಿ.ಮೀ. ಗಳಿರುತ್ತದೆ. ಕೊಡಗಿನ ವೀರರಾಜೇಂದ್ರ ಅಳಿದ ಮಡಿಕೇರಿ ನಗರದಲ್ಲಿ ರಾಜರ ಕಾಲದ ಗದ್ದಿಗೆ, ರಾಜರ ಕಾಲದ ಕೋಟೆ ಮಡಿಕೇರಿ ನಗರ ಸಭೆಯ ವ್ಯಾಪ್ತಿಯಲ್ಲಿರುತ್ತದೆ. ಈ ಸ್ಥಳವು ಪುರಾತತ್ವ ಇಲಾಖೆಗೆ ಒಳಪಡುತ್ತದೆ. ಪ್ರವಾಸ ತಾಣವೆಂದೆ ಪ್ರಸಿದ್ದಿ ಪಡೆದ ಅಬ್ಬಿ ಜಲಪಾತ 8 ಕಿ.ಮೀ. ಅತೀ ಎತ್ತರದ ಬೆಟ್ಟ ಮಾಂದಲಪಟ್ಟಿ 25 ಕಿ.ಮೀ. ದೂರದಲ್ಲಿರುತ್ತದೆ. ನಗರದೊಳಗೆ ಬರುವ ಪ್ರವಾಸಿತಾಣವಾದ ರಾಜಾಸೀಟ್ ಉದ್ಯಾನವನ ನಗರಸಭೆ ಸಮೀಪದಲ್ಲಿರುತ್ತದೆ. ಇದಲ್ಲದೆ ಪ್ರವಾಸಿ ತಾಣಗಳಾದ ಕಾವೇರಿ ಮಾತೆ ಉಗಮ ಸ್ಥಾನ ತಲಕಾವೇರಿ ಭಾಗಮಂಡಲ 42 ಕಿ.ಮೀ., ನಾಗರಹೊಳೆ 110 ಕಿ.ಮೀ., ದುಬಾರೆ 35 ಕಿ.ಮೀ., ಕಾವೇರಿ ನಿಸರ್ಗಧಾಮ 28 ಕಿ.ಮೀ. ದೂರದಲ್ಲಿರುತ್ತದೆ. ಮಡಿಕೇರಿಯಲ್ಲಿ ಐತಿಹಾಸಿಕ ದಸರಾ ಉತ್ಸವನ್ನು ವರ್ಷಂಪ್ರತಿ 9 ದಿನಗಳ ಕಾಲ ನಗರಸಭೆ ವತಿಯಿಂದ ಆಚರಿಸಲಾಗುತ್ತದೆ. ಈ ಉತ್ಸವಕ್ಕೆ ಸರ್ಕಾರ ಜನೋತ್ಸವ ಎಂದು ಹೆಸರಿಟ್ಟದೆ. ದಸರಾ ಉತ್ಸವ ಹಗಲು ರಾತ್ರಿ ನಡೆಯುವ ಬೃಹತ್ ದೊಡ್ಡ ಉತ್ಸವವಾಗಿದ್ದು ಇದನ್ನು ಸವಿಯಲು ಜನಸಾಗರವೇ ಹರಿದು ಬರುತ್ತದೆ.

 

ಗಣಕೀಕರಣ ಯೋಜನೆಗಳು:

ಜನನ-ಮರಣ(Birth and Death Online Application):

1996 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ಜನನ ಹಾಗು ಮರಣ ದಾಖಲೆಗಳು ಗಣಕೀಕರಣಗೊಳಿಸಲಾಗಿದೆ, ಸಾರ್ವಜನಿಕರು ನಗರಸಭೆ ಅಧಿಕೃತ ವೈಬ್ ಸೈಟ್ ಮೂಲಕ ದಾಖಲೆಗಳನ್ನು ಪರಿಶೀಲಿಸಬಹುದು ಹಾಗು ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ. 1990 ರಿಂದ 1995ರವರೆಗಿನ ಜನನ ಹಾಗು ಮರಣ ದಾಖಲೆಗಳ ಡಾಟಾ ಎಂಟ್ರಿ ಕಾರ್ಯ ಪ್ರಗತಿಯಲ್ಲಿದೆ ದಾಖಲೆಗಳನ್ನು ಸಹ ಶೀಘ್ರದಲ್ಲೇ online ಮುಖಾಂತರ ಪರಿಶೀಲಿಸಬಹುದು. ಅಧಿಕೃತ ವೆಬ್ ಸೈಟ್ link: http://www.madikericity.gov.in/egbnd/index.jsp

 

ಸಾರ್ವಜನಿಕ ದೂರು ನಿವಾರಣಾ ಕೇಂದ್ರ(Public Grievance Redressal System (P.G.R)):

ನಿರ್ಮಲನಗರ ಯೋಜನೆಯಡಿ ಸಾರ್ವಜನಿಕ ದೂರು ನಿವಾರಣಾ ಕೇಂದ್ರ ತೆರೆಯಲಾಗಿದ್ದು, ಈ ಕೇಂದ್ರವು ವಾರದ 7 ದಿನಗಳು ಹಾಗೂ ದಿನದ 24 ಘಂಟೆಗಳು ಕಾರ್ಯನಿರ್ವಹಿಸಿರುತ್ತದೆ. ಸಾರ್ವಜನಿಕರು ದೂರುಗಳನ್ನು ಪತ್ರ, ದೂರವಾಣಿ ಹಾಗು ಆನ್ ಲೈನ್ ಆಪ್ಲೀಕೇಷನ್ ಮೂಲಕ ಸಲ್ಲಿಸಬಹುದು ಸಹಾಯವಾಣಿ: 08272-220111 ವೆಬ್ ಸೈಟ್ link: http://www.madikericity.gov.in/pgr/grievance-redressal.jsp

 

ಸ್ಥಳೀಯ ಸಂಸ್ಥೆಯ ವೆಬ್ ಸೈಟ್:

ಮಡಿಕೇರಿ ನಗರಸಭೆ ಅಧಿಕೃತ ಅಂತರ್ಜಾಲ http://www.madikericity.gov.in/ ಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.


ಭೌಗೋಳಿಕ ಆಸ್ತಿ ತೆರಿಗೆ ಯೋಜನೆ:

ಮಡಿಕೇರಿ ನಗರಸಭೆ ವ್ಯಾಪ್ತಿಯ ಬರುವ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ.


 

 

 

No. Of Visitors :
Last Updated   : 21/02/2012  Release History
Release 2.0.0, Powered By Karnataka Municipal Data Society & maintained by Madikeri CMC
This website can best viewed with the resolution 1024 * 768 using Internet Explorer 7.0 or above.
Valid CSS!